ಡಾ. ಸುನಿತಾ ಶೆಟ್ಟಿ, ಮುಂಬಯಿ ಮಹಾನಗರದ ಸಂಸ್ಕೃತಿ ವಲಯದ ಅಭಿವ್ಯಕ್ತಿಗಳಾದ, ಭಾಷೆ, ಸಂಗೀತ,ನಾಟಕ,ಸಾಹಿತ್ಯ ಸಮ್ಮೇಳನಗಳು, ಮೊದಲಾದವುಗಳಲ್ಲಿ ಅತ್ಯಂತ ಸಕ್ರಿಯರಾಗಿ ಭಾಗವಹಿಸುವುದಲ್ಲದೆ ಪ್ರೋತ್ಸಾಹಕೊಡಲು ಸದಾ ನಿರತರಾಗಿರುವ ವ್ಯಕ್ತಿಗಳಲ್ಲೊಬ್ಬರು. ಅವರು ಕನ್ನಡ, ತುಳು ಕನ್ನಡಿಗರಿಗೆ ಪರಿಚಿತರು. == ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿ == ಸುನಿತಾ ಶೆಟ್ಟಿಯವರು, (೨೭-೦೬-೧೯೩೨) ಮಂಗಳೂರು ತಾಲ್ಲೂಕಿನ ಕಳವಾರು ಗ್ರಾಮದಲ್ಲಿ ಜನಿಸಿದರು. ಅವರ ತಂದೆ ತಾಯಿಗಳು, ಕೂಕ್ರ ಡಿ.ಶೆಟ್ಟಿ,ಹಾಗೂ ಸುಂದರಿ ಶೆಟ್ಟಿಯವರು. ಪ್ರಾಥಮಿಕ ಶಿಕ್ಷಣ ಕಳವಾರಿನಲ್ಲಿ, ಮನೆಹತ್ತಿರದ ಶಾಲೆಯಲ್ಲಿ, (೧ರಿಂದ ೫ ನೆಯ ಇಯತ್ತೆವರೆಗೆ) ನಡೆಯಿತು. ಮಾಧ್ಯಮಿಕ ಶಾಲೆ. ಕಳವಾರಿನ ಚರ್ಚ್ ಶಾಲೆಯಲ್ಲಿ (೬ರಿಂದ ೮ನೆಯ ಇಯತ್ತೆ) ಪ್ರೌಢಶಾಲೆ ವಿದ್ಯಾದಾಯಿನಿ ಹೈಸ್ಕೂಲ್ ಸೂರಾತ್ಕಲ್, (೯ ರಿಂದ ೧೧ ನೇ ಇಯತ್ತೆವರೆಗೆ) ಇಂಟರ್ ಮೀಡಿಯೆಟ್ ಮಂಗಳೂರಿನ ಸರ್ಕಾರಿ ಕಾಲೇಜ್, ಬಿ.ಟಿ-ಮಂಗಳೂರಿನ ಕಾಲೇಜ್, ಎಂ.ಎ. ಮುಂಬಯಿ ವಿಶ್ವವಿದ್ಯಾಲಯ, ಪಿ.ಎಚ್.ಡಿ.ಪದವಿ. == ವಿವಾಹ == ಸುನಿತಾರವರು, ಮಹಾಬಲಶೆಟ್ಟಿಯವರ ಜೊತೆ ವಿವಾಹವಾದರು. ಅಧ್ಯಾಪತಕಿಯಾಗಿ, ಕೋಟೆಕಾರಿನ ಆನಂದಾಶ್ರಮ ಹೈಸ್ಕೂಲ್,ದಲ್ಲಿ ಕೆಲವು ತಿಂಗಳೂ,ಮುಂಬಯಿನ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ, ೧೯೬೬ ರ ವರೆಗೆ, ಕನ್ನಡ ಪ್ರಾಧ್ಯಾಪಕಿ, ಖಲ್ಸಾ ಕಾಲೇಜ್, ಮುಂಬಯಿ. ೧೯೬೬ರ ರಿಂದ ಕಾಲೇಜಿನಲ್ಲಿ ಕೆಲಸಮಾಡುತ್ತಿದ್ದ ಸಮಯದಲ್ಲೇ ಸಾಹಿತ್ಯಿಕ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು. ಕನ್ನಡ ಹಾಗು ತುಳು ಭಾಷೆಯಲ್ಲಿ ಒಳ್ಳೆಯ ಲೇಖಕಿಯಾಗಿ ಜನಪ್ರಿಯತೆಗಳಿಸಿದ್ದರು. ಆವರು ಪ್ರಕಟಿಸಿದ ಕವನ ಸಂಕಲನಗಳು : ಪಿಂಗಾರ, ಸಂಕ್ರಾಂತಿ, ನಾಗಸಂಪಿಗೆ, ಕವನ ಸಂಕಲನಗಳು ತುಳು ಸಂಸ್ಕೃತಿಯ ಪರಿಚಯವನ್ನು ಮಾಡುವಲ್ಲಿ ಯಶಸ್ವಿಯಾಗಿರುವುದಲ್ಲದೆ, ತುಳುನಾಡಿನ ಮಹಿಳೆಯರ ಭಾವನೆಗಳಿಗೆ ನೇರವಾಗಿ ಸ್ಪಂದಿಸಿವೆ. ಸುನಿತಾರವರು, ಮುಂಬಯಿ ವಿಶ್ವವಿದ್ಯಾಲಯದಿಂದ 'ಡಾಕ್ಟರೇಟ್ ಪದವಿ' ಗಳಿಸಿದರು. ಅವರು ತೆಗೆದುಕೊಂಡ ವಿಷಯ, 'ವಿಮೆನ್ ಇನ್ ದ ನಾವೆಲ್ಸ್ ಆಫ್ ಡಾ ಶಿವರಾಮ ಕಾರಂತ' == ಸೃಜನಾ ಬರಹಗಾರ್ತಿಯರ ಬಳಗದಲ್ಲಿ == ಡಾ.ಸುನಿತಾ ಶೆಟ್ಟಿಯವರು, ಮುಂಬಯಿನಗರದ ಬರಹಗಾರ್ತಿಯರ ಬಳಗದ ಮಾರ್ಗದರ್ಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. == ಪ್ರಶಸ್ತಿಗಳು == ೧೯೯೬-೯೭ ರ ಸಾಲಿನ, ಕರ್ನಾಟಕ ತುಳು ಅಕ್ಯಾಡೆಮಿ ಪ್ರಶಸ್ತಿ. ೨೦೧೮ ರ ಸಾಲಿನ 'ಯು.ಎ.ಇ ಬಂಟ್ಸ್ ನ ಪ್ರತಿಷ್ಠಿತ ಬಂಟ್ ವಿಭೂಷಣ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಡಾ. ಸುನೀತಾ ಎಂ.ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. == ಉಲ್ಲೇಖಗಳು == == ಬಾಹ್ಯಸಂಪರ್ಕಗಳು == ಉದಯವಾಣಿ, ಪು.೧೨, ಮಹಾರಾಷ್ಟ್ರ ವಾರ್ತೆಗಳು,೧,೧೦,೨೦೧೫,ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ೮ನೇ ವಾರ್ಷಿಕ ಮಹಾಸಭೆ,"ಸಂಸ್ಥೆಯನ್ನು ಸಂಘಟಿಸಲು ಮುಂದಾಗೋಣ": ಸುನಿತಾಶೆಟ್ಟಿ , , 27 2016: . ಶಿಷ್ಯನ ಸಾಧನೆಯೇ ಗುರುವಿಗೆಸಲ್ಲುವ ದೊಡ್ಡ ಗೌರವ,ಡಾ.ಸುನಿತಾಶೆಟ್ಟಿ, ಕರ್ನಾಟಕ ಮಲ್ಲ, ೦೫,ಮಾರ್ಚ್, ೨೦೧೭,ದಿವಂಗತ ವಿದ್ವಾನ್ ರಾಮಚಂದ್ರ ಉಚ್ಚಿಲ್ ಸಂಸ್ಮರಣಾರ್ಥ ಪ್ರಶಸ್ತಿಯನ್ನು ಮುಂಬಯಿನ ಶ್ರೇಷ್ಠರಂಗನಟ ,ಶಿಮುಂಜೆ ಪರಾರಿ (ಸೀತಾರಾಮಶೆಟ್ಟಿ)ಯವರಿಗೆ ಪ್ರದಾನ ಮಾಡಲಾಯಿತು. ಕರ್ನಾಟಕ ಮಲ್ಲ, 21 , 2017, ಪು.8,ಮಂಗಳೂರಿನಲ್ಲಿ ಕಕ್ಷಿಣಕನ್ನಡ ಜಿಲ್ಲಾ ಮಹಿಳಾ ಸಾಹಿತ್ಯ, ಡಾ.ಎಸ್.ಸುನಿತಾಶೆಟ್ಟಿ, ಮುಂಬಯಿಯವರಿಂದ ಉದ್ಘಾಟನಾ ಭಾಷಣ ಉದಯವಾಣಿ, ೧೭,ಅಕ್ಟೋಬರ್, ೨೦೧೭,ಪು.೧೦,'ಮಹಾರಾಷ್ಟ್ರ ಕರ್ನಾಟಕ, ಮುಂದಿನ ಪೀಳಿಗೆಗೆ ಸಾಧಕರ ಬದುಕು ಪರಿಚಯ ಅವಶ್ಯ : ಡಾ.ಸುನೀತಾ ಶೆಟ್ಟಿ. ಬಿಲ್ಲವ ಭವನದಲ್ಲಿ 'ಅನನ್ಯ ಕಾರ್ಯ ಪ್ರವೃತ್ತ ಮೋಹನ್ ಸಿ.ಪೂಜಾರಿ' ಕೃತಿ ಬಿಡುಗಡೆ "ಪ್ರಶಸ್ತಿಗಿಂತ ದೊಡ್ಡದು ನನಗೆ ಮುಂಬಯಿನೆಲದ ಮಣ್ಣು"-ಡಾ.ಸುನೀತಾ ಎಂ.ಶೆಟ್ಟಿ,ಕರ್ನಾಟಕ ಮಲ್ಲ, ೧೪,೧೧,೨೦೨೧,ಪುಟ.೮-ಶ್ರೀನಿವಾಸ ಜೋಕಟ್ಟೆ 2021-11-14 ವೇಬ್ಯಾಕ್ ಮೆಷಿನ್ ನಲ್ಲಿ.